ಚಿಕ್ಕಮಗಳೂರು: ಜನವರಿ 8 ರಂದು, ಬೆಂಗಳೂರು ಮುಖ್ಯಮಂತ್ರಿ ಸಮುಖದಲ್ಲಿ ಆರು ಮಂದಿ ನಕ್ಸಲರು ಶರಣಾಗತಿಯಾದ ಬೆನ್ನಲ್ಲೇ ಮತ್ತೊಬ್ಬ ನಕ್ಸಲ್ ಶಸ್ತ್ರತ್ಯಾಗ ಮಾಡುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶಾಂತಿಗಾಗಿ ನಾಗರಿಕ ವೇದಿಕೆಯ ಸದಸ್ಯರೊಂದಿಗೆ ನಕ್ಸಲ್ ರವೀಂದ್ರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಅವರು ಕೇರಳ ಅಥವಾ ತಮಿಳುನಾಡಿಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿತ್ತು ರವೀಂದ್ರ ಮುಖ್ಯವಾಹಿನಿಗೆ ಬಂದಲ್ಲಿ ರಾಜ್ಯದಲ್ಲಿ ಎರಡು ದಶಕಗಳ ನಕ್ಸಲ್ ಚಳವಳಿ ಅಂತ್ಯಗೊಳ್ಳುವ ಸಾಧ್ಯತೆ ಇದೆ.
ಶಸ್ತ್ರತ್ಯಾಗ ಪ್ಯಾಕೇಜ್: ಮುಖ್ಯವಾಹಿನಿಯತ್ತ ಮತ್ತೋರ್ವ ನಕ್ಸಲ್?
