Contact Information

Jattipalya, Chennenahalli, Magadi Road,
Bengaluru

ಬೆಂಗಳೂರು, 15 ಫೆಬ್ರವರಿ 2025: ಇಲ್ಲದ ನೆಪ ಹೇಳಿ ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆಯಾದ 10 ವಿಶ್ವವಿದ್ಯಾಲಯಗಳ ಪೈಕಿ ಒಂಬತ್ತನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಮೂರ್ಖತನದಿಂದ ಕೂಡಿದೆ. ಉತ್ತಮ ಶಿಕ್ಷಣ ಮತ್ತು ಎಲ್ಲರಿಗೂ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಾದ ಸರ್ಕಾರ ಇರುವ ವಿವಿಗಳನ್ನು ಮುಚ್ಚುವ ಮೂಲಕ ಸಾಕಷ್ಟು ಜನರ ಉದ್ಯೋಗ ಕಸಿಯುವುದರ ಜೊತೆಗೆ ತಮ್ಮದೇ ಜಿಲ್ಲೆಯ ವಿವಿ ಮೂಲಕ ಉನ್ನತ ವ್ಯಾಸಂಗ ಮಾಡುವ ಸ್ಥಳೀಯ ವಿದ್ಯಾರ್ಥಿಗಳ ಅನುಕೂಲಗಳನ್ನು ಇಲ್ಲವಾಗಿಸುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಕಿಡಿ ಕಾರಿದ್ದಾರೆ.

ಮುಂದುವರಿದ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ವಿವಿಗಳ ಸಂಖ್ಯೆ ಜನಸಂಖ್ಯೆಯ ಅನುಪಾತದಲ್ಲಿ ನೋಡಿದರೆ ಬಹಳ ಕಡಿಮೆ. ಇಂತಹ ಸನ್ನಿವೇಶದಲ್ಲಿ ಮತ್ತಷ್ಟು ಕಾಲೇಜು, ವಿವಿಗಳನ್ನು ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ ಕರ್ನಾಟಕ ಸರ್ಕಾರ ಇರುವ ವಿವಿ ಗಳನ್ನೇ ಮುಚ್ಚಲು ಹೊರಟಿದೆ. ಇದಕ್ಕೆ ಹಣಕಾಸಿನ ಕೊರತೆಯ ಸಮಸ್ಯೆಯನ್ನು ಮುಂದಿಡುತ್ತಿದೆ. ಈ 9 ವಿಶ್ವವಿದ್ಯಾನಿಲಯಗಳನ್ನು ನಡೆಸಲು ವಾರ್ಷಿಕ 342 ಕೋಟಿ ಬೇಕಾಗುತ್ತದೆ ಎಂದು ವರದಿ ಹೇಳುತ್ತಿದೆ. ವಾರ್ಷಿಕ 3.50 ಲಕ್ಷ ಕೋಟಿ ಬಜೆಟ್ ಮಂಡಿಸುವ ಕರ್ನಾಟಕ ರಾಜ್ಯದಲ್ಲಿ 350 ಕೋಟಿ ಇದಕ್ಕಾಗಿ ಮೀಸಲಿಡಲು ಸಾಧ್ಯವಿಲ್ಲವೇ? ರಾಜಕಾರಣಿಗಳಿಗೆ ಸೌಲಭ್ಯ ಒದಗಿಸುವ ನೆಪದಲ್ಲಿ ವ್ಯಯವಾಗುವ ಹಣದಲ್ಲಿ 10-20% ಕಡಿತ ಮಾಡಿದರೂ ಇಷ್ಟೂ ವಿವಿಗಳು ಯಾವುದೇ ಸಮಸ್ಯೆ ಇಲ್ಲದೆ ಕಾರ್ಯನಿರ್ವಹಿಸಬಹುದು. ಕುಂಭಮೇಳದಲ್ಲಿ ಶಾಸಕರನ್ನು ಸ್ನಾನ ಮಾಡಿಸಲು ಸರ್ಕಾರ 50-60 ಲಕ್ಷ ರೂಪಾಯಿ ಖರ್ಚುಮಾಡಲು ಸಿದ್ದತೆ ನಡೆದಿದೆ ಎಂದು ಕೇಳಿದ್ದೇನೆ. ವಿವಿಗಳಿನ್ನು ನಡೆಸಲು ಹಣಕಾಸಿನ ಕೊರತೆಯಾಗುತ್ತಿದೆ ಯಾದರೆ ಇದೆಲ್ಲ ಏನು? ಎಂದು ಮಜೀದ್ ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಸರ್ಕಾರ ಇಂತಹ ಕುಂಟು ನೆಪಗಳನ್ನು ಮುಂದಿಟ್ಟು ರಾಜ್ಯದ ಭವಿಷ್ಯದ ಜೊತೆ ಚೆಲ್ಲಾಟವಾಡದೆ. ವಿವಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಮಜೀದ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share:

administrator

Leave a Reply

Your email address will not be published. Required fields are marked *