ಹೊಸದಿಲ್ಲಿ: ಯತಿ ನರಸಿಂಹಾನಂದ್ ವಿರುದ್ಧದ ಪೋಸ್ಟ್‌ಗೆ ಸಂಬಂಧಿಸಿದಂತೆ ದಾಖಲು ಮಾಡಲಾಗಿರುವ ಪ್ರಕರಣ ಕುರಿತು ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರನ್ನು ಫೆಬ್ರವರಿ 17ರವರೆಗೆ ಬಂಧಿಸದಂತೆ ಅಲಹಾಬಾದ್ ಹೈಕೋರ್ಟ್ ತಡೆಯನ್ನು ವಿಸ್ತರಿಸಿದೆ. ನ್ಯಾಯಮೂರ್ತಿ ಸಿದ್ಧಾರ್ಥ ವರ್ಮಾ ಮತ್ತು ನ್ಯಾಯಮೂರ್ತಿ ಯೋಗೇಂದ್ರ ಕುಮಾರ್ ಶ್ರೀವಾಸ್ತವ ಅವರ ಪೀಠ ಈ ಆದೇಶವನ್ನು ಹೊರಡಿಸಿದೆ.
ಯತಿ ನರಸಿಂಹಾನಂದ್ ಅವರ ಸಹಚರರು ನೀಡಿರುವ ದೂರಿನ ಮೇರೆಗೆ, ಧರ್ಮಗಳ ನಡುವೆ ದ್ವೇಷ ಬಿತ್ತುತ್ತಿದ್ದಾರೆ ಎಂದು ಆರೋಪಿಸಿ ಝುಬೈರ್ ವಿರುದ್ಧ ಗಾಝಿಯಾಬಾದ್ ಪೊಲೀಸರು 2024ರ ಅಕ್ಟೋಬರಿನಲ್ಲಿ ಎಫ್ಐಆರ್ ದಾಖಲು ಮಾಡಿದ್ದರು. ಈ ಎಫ್‌ಐಆರ್ ವಿರುದ್ಧ ಝುಬೈರ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.