ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿ, ಎಂ. ಎಸ್. ಶಾ, 15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೋಕ್ಸೊ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದಾನೆ. ಆತ ತಮಿಳುನಾಡು ಬಿಜೆಪಿಯಲ್ಲಿ ಆರ್ಥಿಕ ವಿಭಾಗದ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ.
ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಈತನನ್ನು ಬಂಧಿಸಲಾಗಿದೆ. ದೂರಿನ ಪ್ರಕಾರ, ಬಾಲಕಿಯ ಫೋನಿನಲ್ಲಿ ಅಶ್ಲೀಲ ಸಂದೇಶಗಳು ಕಂಡು ಬಂದ ಹಿನ್ನಲೆಯಲ್ಲಿ, ಬಾಲಕಿಯನ್ನು ಪೋಷಕರು ಪ್ರಶ್ನಿಸಿದಾಗ ಎಂ. ಎಸ್. ಶಾ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಆಕೆಯ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆ ನಡೆಸಿದ್ದಾನೆ. ಆ ನಂತರ ಬಾಲಕಿಗೆ ದ್ವಿಚಕ್ರ ವಾಹನ ನೀಡುವ ಭರವಸೆ ನೀಡಿದ್ದಾನೆ.