ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಛ್ನಲ್ಲಿ ಗುರುವಾರ ನಡೆದ ಎಬಿವಿಪಿಯ ‘ತಿರಂಗಾ’ ರ್ಯಾಲಿಯಲ್ಲಿ ಹಲವಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದಾರೆ. ಈ ಬೆಳವಣಿಗೆ ಪಿಡಿಪಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದ್ದು, ವಿವಾದಕ್ಕೆ ಕಾರಣವಾಗಿದೆ.
ರ್ಯಾಲಿಯ ಹಿಂದಿನ ದಿನ, ಪೂಂಛ್ ಜಿಲ್ಲೆಯ ಶಿಕ್ಷಣ ಇಲಾಖೆಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಆದೇಶ ನೀಡಲಾಗಿದೆ ಎಂದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರ, ಎಬಿವಿಪಿಯ ಸೈದ್ಧಾಂತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಬಲವಂತ ಮಾಡಿದೆ ಎಂದು ಪಿಡಿಪಿ ಆರೋಪಿಸಿದೆ. ರ್ಯಾಲಿಯ ಕುರಿತಾಗಿ ತನಿಖೆ ನಡೆಸುವಂತೆ ಪೂಂಛ್ ಜಿಲ್ಲೆಯ ಪ್ರಮುಖ ಬುಡಕಟ್ಟು ಸಂಘಟನೆಯೊಂದು ಒತ್ತಾಯಿಸಿದೆ.