ರಾಷ್ಟ್ರ

ಟ್ರಂಪ್‌ ಪ್ರಮಾಣ ವಚನ: ವೇಟರ್‌ಗೆ ಬಂದ ಆಹ್ವಾನ, ಪ್ರಧಾನಿಗೆ ಬರಲಿಲ್ಲ – ಸ್ವಾಮಿ ವ್ಯಂಗ್ಯ

ಹೊಸದಿಲ್ಲಿ: ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸಮಾರಂಭದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿರುವುದನ್ನು ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸ್ವಾಮಿ, “ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ʼಭಾರತವನ್ನು ಆಹ್ವಾನಿಸಲಾಗಿದೆʼ ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿದ ಸುದ್ದಿಯನ್ನು ನೋಡಿ ನನ್ನ ಅಮೆರಿಕದ ಸ್ನೇಹಿತರು ನಗುತ್ತಿದ್ದಾರೆ. ವೇಟರ್‌ಗೆ ಆಹ್ವಾನ ನೀಡಲಾಗಿದೆ, ಆದರೆ ಪ್ರಧಾನಿಗೆ ಆಹ್ವಾನ ನೀಡಲಾಗಿಲ್ಲ! ಇದು ಇನ್ನೂ ದೊಡ್ಡ ಅವಮಾನವಲ್ಲವೇ?” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿಗೆ ಆಹ್ವಾನ ತರಲು ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಅಮೆರಿಕಕ್ಕೆ ಕಳುಹಿಸಲಾಗಿತ್ತು. ಡಿಸೆಂಬರ್ 24 ರಿಂದ 29 ನಡುವೆ ಜೈಶಂಕರ್ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸ್ವಾಮಿ, “ಮೋದಿ ಅವರು ವೇಟರ್ ಅವರನ್ನು ಅಮೆರಿಕಕ್ಕೆ ಕಳುಹಿಸಿ, ತಮಗೆ ಆಹ್ವಾನವನ್ನು ತರುವಂತೆ ಹೇಳಿದ್ದಾರೆ, ಇಲ್ಲದಿದ್ದರೆ ಅವರು ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ. ಆದರೆ ಪ್ರಸ್ತುತ, ಡೊನಾಲ್ಡ್ ಟ್ರಂಪ್ ಅವರು ಮೋದಿಯನ್ನು ಆಹ್ವಾನಿಸುವ ಮನಸ್ಥಿತಿಯಲ್ಲಿ ಇಲ್ಲ” ಎಂದು ಆ ಸಂದರ್ಭದಲ್ಲಿ ಸ್ವಾಮಿ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದರು.

admin

Recent Posts

ದ್ವೀತಿಯ ಪಿ.ಯು.ಸಿಯಲ್ಲಿ ಅದ್ಭುತ ಸಾಧನೆ ಮಾಡಿದ ಬದ್ರುಲ್ ಮುನೀರ್

ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜ್ ಕಾಲೇಜಿನ ವಿಧ್ಯಾರ್ಥಿ ಬದ್ರುಲ್ ಮುನೀರ್ ದ್ವೀತಿಯ ಪಿ.ಯು.ಸಿಯ ವಾಣಿಜ್ಯ ವಿಭಾಗದಲ್ಲಿ…

4 hours ago

ಇಂಧನದ ಮೇಲಿನ ಅಬಕಾರಿ ಸುಂಕ ರೂ. 2 ಹೆಚ್ಚಿಸಿದ ಕೇಂದ್ರ ಸರ್ಕಾರ

ಹೋಸದಿಲ್ಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ. ಪೆಟ್ರೋಲ್…

2 weeks ago

ಪ. ಬಂ ದಲ್ಲಿ ಬಿಜೆಪಿ ಗೆದ್ದರೆ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಗೆಸೆಯುತ್ತೇವೆ: ಸುವೇಂದು

ಕೊಲ್ಕತ್ತಾ: ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ಸರ್ಕಾರ ರಚಿಸಿದ ಬಳಿಕ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಹಾಕುತ್ತೇವೆ ಎಂದು…

1 month ago

ಕರ್ನಾಟಕ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುಳಾ ಆತ್ಮಹತ್ಯೆ

ಬೆಂಗಳೂರು: ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುಳಾ ಎಂಬುವವರು ನಗರದ ಮತ್ತಿಕೆರೆಯ ತಮ್ಮ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ…

1 month ago

ಜಾರ್ಖಂಡ್ ನಲ್ಲಿ ಮೇಕೆ ಕಳ್ಳತನದ ಆರೋಪ. ಇಬ್ಬರು ಯುವಕರನ್ನು ಥಳಿಸಿ ಹತ್ಯೆಗೈದ ಗುಂಪು

ರಾಂಚಿ: ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಮೇಕೆ ಕಳ್ಳತನದ ಆರೋಪದಲ್ಲಿ ಇಬ್ಬರು ಯುವಕರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ನಡೆದಿದೆ.…

2 months ago

ಅವರು ನಮ್ಮಿಂದ ಚೆನ್ನಾಗಿ ಲಾಭ ಪಡೆಯುತ್ತಾರೆ. USAID ಕುರಿತು ಭಾರತವನ್ನು ಮತ್ತೆ ಕುಟುಕಿದ ಟ್ರಂಪ್

ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಗೆ USAID ಮೂಲಕ 18 ಮಿಲಿಯನ್ ಡಾಲರ್…

2 months ago