ಕೊಲ್ಕತ್ತಾ: ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ಸರ್ಕಾರ ರಚಿಸಿದ ಬಳಿಕ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಹಾಕುತ್ತೇವೆ ಎಂದು ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂಧು ಅಧಿಕಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ ಸದಸ್ಯರು ತೀವ್ರವಾಗಿ ವಿರೋಧಿಸಿದ್ದು, ಇದು ದ್ವೇಷಭಾಷಣ ಎಂದು ಜರಿದಿದ್ದಾರೆ. ಬಿಜೆಪಿ ಶಾಸಕಿ ತಪಸಿ ಮಂಡಲ್ ಬಂಡಾಯ ಎದ್ದ ನಂತರ ಸುವೇಂಧು ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಕೆಲವು ಟಿಎಂಸಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಫೆಬ್ರವರಿ 17ನೇ ತಾರೀಖಿನಿಂದ ಬಜೆಟ್ ಅಧಿವೇಶನದ ಅಂತ್ಯದವರೆಗೂ ಸದನದಿಂದ ಅಮಾನತಾಗಿದ್ದ ಸುವೇಂಧು ಅಧಿಕಾರಿ, ಮಮತಾ ಬನರ್ಜಿ ಸರ್ಕಾರವನ್ನು ಮುಸ್ಲಿಮ್ ಓಲೈಕೆ ಸರ್ಕಾರ ಎಂದು ಟೀಕಿಸಿದ್ದರು ಮತ್ತು ಮಮತಾ ಬ್ಯಾನರ್ಜಿ ಅವರು ಟಿಎಂಸಿ ಪಕ್ಷ ಮುಸ್ಲಿಂ ಲೀಗ್ ನ ಎರಡನೇ ಅವತಾರದಂತೆ ಕಾರ್ಯನಿರ್ವಹಿಸುತ್ತಿದೆ ಆರೋಪಿಸಿದ್ದರು.