Contact Information

Jattipalya, Chennenahalli, Magadi Road,
Bengaluru

ಹೊಸದಿಲ್ಲಿ: “ನಮಗೆ ಕೈಕೋಳ ತೊಡಿಸಿ, ಕಾಲುಗಳನ್ನು ಸರಪಳಿಯಿಂದ ಬಿಗಿಯಲಾಗಿತ್ತು. ಅಮೃತಸರ ವಿಮಾನ ನಿಲ್ದಾಣದಲ್ಲಿ ಅವುಗಳನ್ನು ಬಿಡಿಸಲಾಯಿತು” ಎಂದು ಅಮೆರಿಕದಿಂದ ಗಡಿಪಾರುಗೊಂಡಿರುವ ಹರ್ಯಾಣ ಮೂಲದ ಜಸ್ ಪಾಲ್ ಸಿಂಗ್ ತಿಳಿಸಿದ್ದಾರೆ.

ಹುಟ್ಟೂರಿಗೆ ತಲುಪಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮನ್ನು ಭಾರತಕ್ಕೆ ಕರೆದೊಯ್ಯಲಾಗುತ್ತಿದೆ ಎಂಬ ಅರಿವು ನಮಗೆ ಇರಲಿಲ್ಲ. ಬೇರೆ ಶಿಬಿರಕ್ಕೆ ಕರೆದೊಯ್ಯುತ್ತಿದ್ದಾರೆ ಎಂದು ಭಾವಿಸಿದ್ದೆವು. ಆದರೆ ಬಳಿಕ ಪೊಲೀಸ್ ಅಧಿಕಾರಿಗಳು ಭಾರತಕ್ಕೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದರು. ಈ ವೇಳೆ ಕೈಕೋಳ ತೊಡಿಸಿ, ಕಾಲುಗಳಿಗೆ ಸರಪಳಿ ಹಾಕಲಾಯಿತು. ಅಮೃತಸರ ವಿಮಾನ ನಿಲ್ದಾಣ ತಲುಪಿದ ಮೇಲೆಯೇ ಅವುಗಳನ್ನು ತೆಗೆಯಲಾಯಿತು” ಎಂದು ವಿವರಿಸಿದರು.

“ಟ್ರಾವೆಲ್ ಏಜೆಂಟ್‌ ವಂಚನೆಗೆ ಒಳಗಾದೆ”

ಅಮೆರಿಕಕ್ಕೆ ಕಾನೂನುಬದ್ಧ ಪ್ರವೇಶ ಕೊಡಿಸುವುದಾಗಿ ಭರವಸೆ ನೀಡಿ ಟ್ರಾವೆಲ್ ಏಜೆಂಟ್ ವಂಚಿಸಿರುವುದಾಗಿ ಜಸ್ ಪಾಲ್ ಸಿಂಗ್ ಆರೋಪಿಸಿದರು. “ಅಮೆರಿಕದ ವೀಸಾ ಬಂದ ಬಳಿಕ ನನ್ನನ್ನು ಕಳುಹಿಸುವಂತೆ ಕೇಳಿದ್ದೆ. 30 ಲಕ್ಷ ರೂಪಾಯಿಗೆ ವ್ಯವಹಾರ ಕುದಿರಿತ್ತು. ಆದರೆ ಆತ ವಂಚನೆ ಮಾಡಿದ್ದಾನೆ” ಎಂದು ಅಳಲು ತೋಡಿಕೊಂಡರು.

“ಕಳೆದ ಜುಲೈನಲ್ಲಿ ನಾನು ವಿಮಾನ ಮೂಲಕ ಬ್ರೆಜಿಲ್ ತಲುಪಿದ್ದೆ. ನಂತರ ಅಮೆರಿಕಕ್ಕೆ ವಿಮಾನದಲ್ಲಿ ಕರೆದೊಯ್ಯುವುದಾಗಿ ಹೇಳಿದ್ದರು. ಆದರೆ, ಟ್ರಾವೆಲ್ ಏಜೆಂಟ್‌ಗಳು ವಂಚನೆ ಮಾಡಿ, ಅಕ್ರಮವಾಗಿ ಗಡಿ ದಾಟುವಂತೆ ಬಲವಂತ ಮಾಡಿದರು” ಎಂದು ಅವರು ವಿವರಿಸಿದರು.

104 ಭಾರತೀಯ ಅಕ್ರಮ ವಲಸಿಗರನ್ನು ಗಡಿಪಾರು ಮಾಡಿದ ಅಮೆರಿಕ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಅಕ್ರಮ ವಲಸೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಬುಧವಾರ ಸಂಜೆ 104 ಭಾರತೀಯ ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕದ ಸೇನಾ ವಿಮಾನ ಅಮೃತಸರದಲ್ಲಿ ಬಂದಿಳಿದಿದೆ.

Share:

administrator

Leave a Reply

Your email address will not be published. Required fields are marked *