ರಾಜ್ಯ

ದೆಹಲಿ ಬಿಜೆಪಿ ಗೆಲುವಿಗೆ ಕಾಂಗ್ರೆಸ್–ಎಎಪಿಯ ಸ್ವಾರ್ಥ, ದುರಹಂಕಾರವೇ ಕಾರಣ: ಎಸ್.ಡಿ.ಪಿ.ಐ

ಬೆಂಗಳೂರು: ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳ ಸ್ವಾರ್ಥ, ಅಹಂ, ದುರಹಂಕಾರ ಹಾಗೂ ಹುಸಿ ಜಾತ್ಯಾತೀತತೆಗೆ ದೆಹಲಿ ಚುನಾವಣೆ ಬಲಿಯಾಗಿದೆ. ಅದರ ಲಾಭ ಪಡೆದಿರುವ ಕೋಮುವಾದಿ ಬಿಜೆಪಿ ಪಕ್ಷ ಚುನಾವಣೆಯನ್ನು ಗೆದ್ದಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ಕಾಂಗ್ರೆಸ್ ಹಾಗೂ ಎಎಪಿ ವಿರುದ್ಧ ತಮ್ಮ ಪ್ರಕಟಣೆಯ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೇಶಕ್ಕೆ ಯಾವ ಕಂಟಕ ಎದುರಾದರೂ ಸರಿ, ನಮ್ಮ ಸ್ವಾರ್ಥವೇ ನಮಗೆ ಮುಖ್ಯ ಎಂಬಂತೆ ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳು ವರ್ತಿಸಿವೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆಗೆ ಹೋಗಿವೆ. ಆ ಮೂಲಕ ದಲಿತ, ಅಲ್ಪಸಂಖ್ಯಾತ ಹಾಗೂ ಸಂವಿಧಾನ ಪರ ಇರುವ ಜಾತ್ಯಾತೀತ ಮತಗಳ ವಿಭಜನೆಗೆ ಕಾರಣವಾಗಿವೆ. ದೆಹಲಿಯಲ್ಲಿ ಕೋಮುವಾದಿ ಬಿಜೆಪಿ ಗೆಲ್ಲಲು ಇದೇ ಪ್ರಮುಖ ಕಾರಣ ಎಂದಿರುವ ಮಜೀದ್ ಅವರು, ಅಲ್ಲಿ ಬಿಜೆಪಿಯ ಮತ ಪ್ರಮಾಣ ಸುಮಾರು 45.8% ಆಗಿದೆ. ಎಎಪಿ ಅಲ್ಲಿ 43.6% ಮತ್ತು ಕಾಂಗ್ರೆಸ್ 6.3% ಮತ ಪಡೆದಿವೆ. ರಾಷ್ಟ್ರದ ಹಿತದೃಷ್ಟಿಯಿಂದ ತಮ್ಮ ಸ್ವಾರ್ಥವನ್ನು ಬದಿಗೊತ್ತಿ ಇವರಿಬ್ಬರೂ ಹೊಂದಾಣಿಕೆ ಮಾಡಿಕೊಂಡಿದ್ದರೆ ಅಲ್ಲಿ ಕೋಮುವಾದಿ ಶಕ್ತಿಗಳನ್ನು ನಿರಾಯಾಸವಾಗಿ ಸೋಲಿಸಬಹುದಿತ್ತು ಎಂದು ಅವರು ತಮ್ಮ ಪ್ರಕಟಣೆಯ ಮೂಲಕ ಬೇಸರ ಮತ್ತು ಸಿಟ್ಟನ್ನು ಹೊರಹಾಕಿದ್ದಾರೆ.

ಸೋಲಿಗೆ ಕಾಂಗ್ರೆಸ್ ಹಾಗೂ ಎಎಪಿಯ ಸ್ವಾರ್ಥ ಒಂದೇ ಕಾರಣವಲ್ಲ. ಅವರು ಹುಸಿ ಜಾತ್ಯಾತೀತತೆಯೂ ಪ್ರಮುಖ ಕಾರಣ. ದೆಹಲಿಯಲ್ಲಿ ಮುಸ್ಲಿಮರ ವಿರುದ್ಧ ದಂಗೆಗಳು ನಡೆದಾಗ, ಮುಸ್ಲಿಮರ ಮನೆಗಳನ್ನು ಬಿಜೆಪಿ ಬುಲ್ಡೋಜ್ ಮಾಡುವಾಗ ಅದನ್ನು ತೆಡೆಯುವುದು ಬಿಡಿ, ಈ ಎರಡೂ ಪಕ್ಷಗಳು ತುಟಿ ಬಿಚ್ಚಲಿಲ್ಲ. ಎಎಪಿಯ ಮಾಜಿ ಕಾರ್ಪೋರೇಟರ್ ತಾಹಿರ್ ಹುಸೇನ್ ಅವರನ್ನು ಬಿಜೆಪಿ ಷಡ್ಯಂತ್ರ ರೂಪಿಸಿ ಗಲಭೆ ಸೃಷ್ಟಿಸಿದ ಆರೋಪ ಹೊರಿಸಿ ಬಂಧಿಸಿದಾಗ. ಅವರ ಬೆನ್ನಿಗೆ ನಿಲ್ಲಬೇಕಿದ್ದ ಎಎಪಿ ಪಕ್ಷ ಅವರನ್ನು ಪಕ್ಷದಿಂದ ಉಚ್ಛಾಟಿಸಿತು. ಈ ಎಲ್ಲ ಬೆಳವಣಿಗೆಗಳು ಅಲ್ಪಸಂಖ್ಯಾತರಲ್ಲಿ ಈ ಎರಡೂ ಪಕ್ಷಗಳ ಮೇಲಿನ ನಂಬಿಕೆಯನ್ನು ಅಲುಗಾಡಿಸಿದವು. ಅದರ ಲಾಭ ಪಡೆದ ಬಿಜೆಪಿ ಮುಸ್ಲಿಂ ಬಾಹುಲ್ಯ ಇರುವ 12 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ತಾಹಿರ ಹುಸೇನ್ ಅವರು ಹೊರ ಬಂದ ನಂತರ ಎಂಐಎಂ ಪಕ್ಷ ಸೇರಿ ಈಗ 33 ಸಾವಿರಕ್ಕೂ ಹೆಚ್ಚು ಮತ ಪಡೆಯುವ ಮೂಲಕ ಮುಸ್ತಫಾಬಾದ್ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದಾರೆ ಎಂದು ಮಜೀದ್ ತಮ್ಮ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳೆಲ್ಲ ನಿಜವಾಗಿಯೂ ದೇಶ ಮೊದಲು ಅನ್ನುವ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿರುವವರಾಗಿದ್ದರೆ ಕೇವಲ ಸಂವಿಧಾನದ ಪ್ರತಿ ಕೈಯ್ಯಲ್ಲಿ ಹಿಡಿದು ಓಡಾಡಿದರೆ ಸಾಲದು. ತಮ್ಮ ವಯಕ್ತಿಕ ಸ್ವಾರ್ಥ, ಅಹಂಕಾರಗಳನ್ನು ಬದಿಗೊತ್ತಿ ಸಮ ಸಮಾಜದಲ್ಲಿ ನಂಬಿಕೆ ಇಟ್ಟಿರುವ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಮುಂದೆ ಸಾಗಬೇಕು. ಇಲ್ಲವಾದರೆ ಭಾರತ ಫ್ಯಾಸಿಸ್ಟ್ ಸರ್ವಾಧಿಕಾರ ಆಡಳಿತದ ರಾಷ್ಟ್ರವಾಗುವ ಅಪಾಯ ಇದೆ ಎಂದು ಮಜೀದ್ ತಮ್ಮ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

admin

Recent Posts

ದ್ವೀತಿಯ ಪಿ.ಯು.ಸಿಯಲ್ಲಿ ಅದ್ಭುತ ಸಾಧನೆ ಮಾಡಿದ ಬದ್ರುಲ್ ಮುನೀರ್

ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜ್ ಕಾಲೇಜಿನ ವಿಧ್ಯಾರ್ಥಿ ಬದ್ರುಲ್ ಮುನೀರ್ ದ್ವೀತಿಯ ಪಿ.ಯು.ಸಿಯ ವಾಣಿಜ್ಯ ವಿಭಾಗದಲ್ಲಿ…

10 minutes ago

ಇಂಧನದ ಮೇಲಿನ ಅಬಕಾರಿ ಸುಂಕ ರೂ. 2 ಹೆಚ್ಚಿಸಿದ ಕೇಂದ್ರ ಸರ್ಕಾರ

ಹೋಸದಿಲ್ಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ. ಪೆಟ್ರೋಲ್…

2 weeks ago

ಪ. ಬಂ ದಲ್ಲಿ ಬಿಜೆಪಿ ಗೆದ್ದರೆ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಗೆಸೆಯುತ್ತೇವೆ: ಸುವೇಂದು

ಕೊಲ್ಕತ್ತಾ: ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ಸರ್ಕಾರ ರಚಿಸಿದ ಬಳಿಕ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಹಾಕುತ್ತೇವೆ ಎಂದು…

1 month ago

ಕರ್ನಾಟಕ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುಳಾ ಆತ್ಮಹತ್ಯೆ

ಬೆಂಗಳೂರು: ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುಳಾ ಎಂಬುವವರು ನಗರದ ಮತ್ತಿಕೆರೆಯ ತಮ್ಮ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ…

1 month ago

ಜಾರ್ಖಂಡ್ ನಲ್ಲಿ ಮೇಕೆ ಕಳ್ಳತನದ ಆರೋಪ. ಇಬ್ಬರು ಯುವಕರನ್ನು ಥಳಿಸಿ ಹತ್ಯೆಗೈದ ಗುಂಪು

ರಾಂಚಿ: ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಮೇಕೆ ಕಳ್ಳತನದ ಆರೋಪದಲ್ಲಿ ಇಬ್ಬರು ಯುವಕರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ನಡೆದಿದೆ.…

2 months ago

ಅವರು ನಮ್ಮಿಂದ ಚೆನ್ನಾಗಿ ಲಾಭ ಪಡೆಯುತ್ತಾರೆ. USAID ಕುರಿತು ಭಾರತವನ್ನು ಮತ್ತೆ ಕುಟುಕಿದ ಟ್ರಂಪ್

ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಗೆ USAID ಮೂಲಕ 18 ಮಿಲಿಯನ್ ಡಾಲರ್…

2 months ago