ರಾಷ್ಟ್ರ

ಜಾರ್ಖಂಡ್ ನಲ್ಲಿ ಮೇಕೆ ಕಳ್ಳತನದ ಆರೋಪ. ಇಬ್ಬರು ಯುವಕರನ್ನು ಥಳಿಸಿ ಹತ್ಯೆಗೈದ ಗುಂಪು

ರಾಂಚಿ: ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಮೇಕೆ ಕಳ್ಳತನದ ಆರೋಪದಲ್ಲಿ ಇಬ್ಬರು ಯುವಕರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ನಡೆದಿದೆ. ಹತ್ಯೆಯಾದವರನ್ನು ಕುಚಿಯಾಸೋಲಿ ಗ್ರಾಮದ ಕಿ ಕಿನ್ಶುಕ್ ಬೆಹೆರಾ (35) ಮತ್ತು ಭೋಲಾನಾಥ್ ಮಹತೋ (26) ಎಂದು ಗುರುತಿಸಲಾಗಿದೆ. ಈ ಘಟನೆ ಶನಿವಾರ ಮುಂಜಾನೆ ಚಾಕುಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸೋನಾಹತು ಪಂಚಾಯತ್‌ನ ಜೋಡಿಸಾ ಗ್ರಾಮದಲ್ಲಿ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ಜೋಡಿಸಾ ಗ್ರಾಮದಲ್ಲಿ ಇದಕ್ಕೂ ಮೊದಲು ಮೇಕೆಗಳ ಕಳ್ಳತನದ ಹಲವು ಪ್ರಕರಣಗಳು ವರದಿಯಾಗಿದ್ದವು. ಶನಿವಾರ ಮುಂಜಾನೆ, ಹರಗೋವಿಂದ್ ನಾಯಕ್ ಎಂಬ ವ್ಯಕ್ತಿಯ ಮನೆಯ ಸಮೀಪ ಕಿನ್ಶುಕ್ ಬೆಹೆರಾ ಮತ್ತು ಭೋಲಾನಾಥ್ ಮಹತೋ ಅವರು ಮೇಕೆಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ, ಅವರು ಮೇಕೆ ಕಳ್ಳತನ ಮಾಡುತ್ತಿದ್ದಾರೆಂದು ನಾಯಕ್ ಕೂಗಿದ್ದಾನೆ. ತಕ್ಷಣವೇ, ಸ್ಥಳೀಯರು ಬೆಹೆರಾ ಮತ್ತು ಮಹತೋ ಅವರನ್ನು ಬೆನ್ನಟ್ಟಿ ಹಿಡಿದು ಅವರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದರೆ.

ಘಟನೆಯಲ್ಲಿ ಕಿನ್ಶುಕ್ ಬೆಹೆರಾ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಭೋಲಾನಾಥ್ ಮಹತೋ ಗಂಭೀರವಾಗಿ ಗಾಯಗೊಂಡಿದ್ದ. ಅವನನ್ನು ಜೆಮ್ಶೆಡ್ಪುರದ ಎಂಜಿಎಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈಸ್ಟ ಸಿಂಗ್‌ಭೂಮ್ ನ ಪೊಲೀಸ್ ಅಧೀಕ್ಷಕ ರಿಷಬ್ ಗಾರ್ಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಕೆಲವು ಗ್ರಾಮಸ್ಥರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

admin

Recent Posts

ಇಂಧನದ ಮೇಲಿನ ಅಬಕಾರಿ ಸುಂಕ ರೂ. 2 ಹೆಚ್ಚಿಸಿದ ಕೇಂದ್ರ ಸರ್ಕಾರ

ಹೋಸದಿಲ್ಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ. ಪೆಟ್ರೋಲ್…

2 weeks ago

ಪ. ಬಂ ದಲ್ಲಿ ಬಿಜೆಪಿ ಗೆದ್ದರೆ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಗೆಸೆಯುತ್ತೇವೆ: ಸುವೇಂದು

ಕೊಲ್ಕತ್ತಾ: ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ಸರ್ಕಾರ ರಚಿಸಿದ ಬಳಿಕ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಹಾಕುತ್ತೇವೆ ಎಂದು…

1 month ago

ಕರ್ನಾಟಕ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುಳಾ ಆತ್ಮಹತ್ಯೆ

ಬೆಂಗಳೂರು: ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುಳಾ ಎಂಬುವವರು ನಗರದ ಮತ್ತಿಕೆರೆಯ ತಮ್ಮ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ…

1 month ago

ಅವರು ನಮ್ಮಿಂದ ಚೆನ್ನಾಗಿ ಲಾಭ ಪಡೆಯುತ್ತಾರೆ. USAID ಕುರಿತು ಭಾರತವನ್ನು ಮತ್ತೆ ಕುಟುಕಿದ ಟ್ರಂಪ್

ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಗೆ USAID ಮೂಲಕ 18 ಮಿಲಿಯನ್ ಡಾಲರ್…

2 months ago

ಕಲಬುರಗಿಯಲ್ಲಿ ಹೃದಯಾಘಾತದಿಂದ ಕಾರ್ಮಿಕನ ಮೃತ್ಯು. ಮೃತದೇಹ ರಸ್ತೆಯಲ್ಲಿ ಎಳೆದೊಯ್ದು ಅವಮಾನ

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಬಳಿಯಿರುವ ಸಿಮೆಂಟ್ ಕಂಪನಿಯಲ್ಲಿ ಲೋ ಬಿಪಿ ಕಾರಣದಿಂದ ಹೃದಯಾಘಾತಕ್ಕೊಳಗಾದ ಕಾರ್ಮಿಕನೊಬ್ಬ ಮೃತಪಟ್ಟಿರುವ…

2 months ago

ಗುಂಪು ಹತ್ಯೆಯಿಂದ ತಂದೆಯನ್ನು ರಕ್ಷಿಸುವ ಯತ್ನ. 16ರ ಮಗಳ ದಾರುಣ ಸಾವು

ಹೈದರಾಬಾದ್: ಗುಂಪುಹತ್ಯೆಯಿಂದ ತನ್ನ ತಂದೆಯನ್ನು ರಕ್ಷಿಸಲು ಮುಂದಾದ 16 ವರ್ಷದ ಅಲಿಯಾ ಬೇಗಂ, ದುಷ್ಕರ್ಮಿಗಳ ಕಲ್ಲಿನ ಏಟಿಗೆ ಬಲಿಯಾಗಿದ್ದಾಳೆ. ಈ…

2 months ago