ಹೊಸ ದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸ 6, ಫ್ಲ್ಯಾಗ್ ಸ್ಟಾಫ್ ಬಂಗಲೆಯ ನವೀಕರಣದ ವೆಚ್ಚಗಳ ಕುರಿತು ಪರಿಶೀಲಿಸುವಂತೆ ಕೇಂದ್ರ ಜಾಗೃತ ಆಯೋಗ (ಸಿವಿಸಿ) ಆದೇಶಿಸಿದೆ. 40,000 ಚದರ ಗಜ (8 ಎಕರೆ) ವಿಸ್ತೀರ್ಣ ಹೊಂದಿರುವ ಐಷಾರಾಮಿ ಮಹಲಾದ ಶೀಶ್ ಮಹಲ್ ನಿರ್ಮಿಸಲು ಕಟ್ಟಡ ನಿಯಮಗಳನ್ನು ಉಲ್ಲಂಘಿಸಿ ಯೋಜನೆ ರೂಪಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಸಿವಿಸಿ, ಕೇಂದ್ರ ಲೋಕೋಪಯೋಗಿ ಇಲಾಖೆಯನ್ನು (ಸಿಪಿಡಬ್ಲ್ಯೂಡಿ) ವಿವರಣಾತ್ಮಕ ತನಿಖೆ ನಡೆಸಲು ಸೂಚಿಸಿದೆ.
ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಅವರು ನೀಡಿರುವ ದೂರಿನ ಮೇರೆಗೆ, ಸಿಪಿಡಬ್ಲ್ಯೂಡಿ 2024 ರ ಫೆಬ್ರವರಿ 13 ರಂದು ಪ್ರತ್ಯೇಕ ವರದಿಯನ್ನು ಸಲ್ಲಿಸಿದ ನಂತರ, ಸಿವಿಸಿ ತನಿಖೆ ಪ್ರಾರಂಭಿಸಿದೆ. ಅಕ್ಟೋಬರ್ 14, 2024 ರಂದು, 6, ಫ್ಲ್ಯಾಗ್ ಸ್ಟಾಫ್ ರಸ್ತೆಯಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರ ಹಿಂದಿನ ಅಧಿಕೃತ ನಿವಾಸದಲ್ಲಿ ಅಕ್ರಮ ನಿರ್ಮಾಣ ನಡೆದಿರುವ ಬಗ್ಗೆ ಗುಪ್ತಾ ಕೇಂದ್ರ ಜಾಗೃತ ಆಯೋಗಕ್ಕೆ ದೂರು ನೀಡಿದ್ದರು.
40,000 ಚದರ ಗಜವರೆಗೆ ವಿಸ್ತೀರ್ಣವನ್ನು ಹೊಂದಿದ ಐಷಾರಾಮಿ ಮಹಲು (‘ಶೀಶ್ ಮಹಲ್’) ನಿರ್ಮಿಸಲು ಕೇಜ್ರಿವಾಲ್ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಗುಪ್ತಾ ಆರೋಪಿಸಿದ್ದಾರೆ. ರಾಜ್ ಪುರ ರಸ್ತೆಯ ಪ್ಲಾಟ್ ಸಂಖ್ಯೆ 45 ಮತ್ತು 47 (ಹಿಂದೆ ಟೈಪ್-ವಿ ಫ್ಲಾಟ್‌ಗಳು, ಹಿರಿಯ ಅಧಿಕಾರಿಗಳು ಮತ್ತು ನ್ಯಾಯಾಧೀಶರಿಗೆ ನೀಡಲಾಗಿದ್ದವು) ಮತ್ತು ಎರಡು ಬಂಗಲೆಗಳನ್ನು (8-ಎ & 8-ಬಿ, ಫ್ಲ್ಯಾಗ್ ಸ್ಟಾಫ್ ರಸ್ತೆ) ಒಳಗೊಂಡಿರುವ ಸರ್ಕಾರಿ ಆಸ್ತಿಗಳನ್ನು ಕೆಡವಿ, ಹೊಸ ನಿವಾಸದಲ್ಲಿ ವಿಲೀನಗೊಳಿಸಿ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಮತ್ತು ಸರಿಯಾದ ವಿನ್ಯಾಸ ಯೋಜನೆ ಅನುಮೋದನೆಗಳನ್ನು ಹೊಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೋಸದಿಲ್ಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ. ಪೆಟ್ರೋಲ್…
ಕೊಲ್ಕತ್ತಾ: ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ಸರ್ಕಾರ ರಚಿಸಿದ ಬಳಿಕ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಹಾಕುತ್ತೇವೆ ಎಂದು…
ಬೆಂಗಳೂರು: ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುಳಾ ಎಂಬುವವರು ನಗರದ ಮತ್ತಿಕೆರೆಯ ತಮ್ಮ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ…
ರಾಂಚಿ: ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಮೇಕೆ ಕಳ್ಳತನದ ಆರೋಪದಲ್ಲಿ ಇಬ್ಬರು ಯುವಕರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ನಡೆದಿದೆ.…
ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಗೆ USAID ಮೂಲಕ 18 ಮಿಲಿಯನ್ ಡಾಲರ್…
ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಬಳಿಯಿರುವ ಸಿಮೆಂಟ್ ಕಂಪನಿಯಲ್ಲಿ ಲೋ ಬಿಪಿ ಕಾರಣದಿಂದ ಹೃದಯಾಘಾತಕ್ಕೊಳಗಾದ ಕಾರ್ಮಿಕನೊಬ್ಬ ಮೃತಪಟ್ಟಿರುವ…