Contact Information

Jattipalya, Chennenahalli, Magadi Road,
Bengaluru

ಆಸ್ಟ್ರೇಲಿಯ, ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲೂ ಭಾರತದ ಬ್ಯಾಟರ್ ಗಳ ಕಳಪೆ ಪ್ರದರ್ಶನ ಮುಂದುವರಿದಿದ್ದು ಇಡೀ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 185 ರನ್‌ಗಳಿಗೆ ಆಲೌಟಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡದ ಬ್ಯಾಟರ್‌ಗಳು ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (40) ಹೊರತುಪಡಿಸಿ, ಉಳಿದ ಯಾರೂ ಉತ್ತಮ ಪ್ರದರ್ಶನ ನೀಡಲಿಲ್ಲ.

ಫಾರ್ಮ್ ಕಳೆದುಕೊಂಡಿರುವ ನಾಯಕ ರೋಹಿತ್ ಶರ್ಮ ಬದಲು ಶುಭಮನ್ ಗಿಲ್ ಪಂದ್ಯದಲ್ಲಿ ಸ್ಥಾನ ಪಡೆದರು. ಆದರೆ ಅವರು ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತಾವು ಎದುರಿಸಿದ ಮೊದಲನೇ ಬಾಲ್ ನಲ್ಲೇ ಶೂನ್ಯಕ್ಕೆ ಔಟಾದರು. ಈ ಎಲ್ಲ ಹಿನ್ನಲೆಯಲ್ಲಿ ಭಾರತ ತಂಡ ಕೇವಲ 185 ರನ್ ಪೇರಿಸುವಷ್ಟರಲ್ಲಿ ಆಲ್ ಔಟ್ ಆಗಿದೆ.

ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲಂಡ್ ನಾಲ್ಕು ವಿಕೆಟ್‌ಗಳನ್ನು ಪಡೆದು ಯಶಸ್ವಿ ಬೌಲರ್ ಆದರು. ಉಳಿದಂತೆ, ಮಿಚೆಲ್ ಸ್ಟಾರ್ಕ್ ಮೂರು ವಿಕೆಟ್, ಪ್ಯಾಟ್ ಕಮಿನ್ಸ್ ಎರಡು ವಿಕೆಟ್ ಹಾಗೂ ನಥಾನ್ ಲಯಾನ್ ಒಂದು ವಿಕೆಟ್ ಗಳಿಸಿದ್ದಾರೆ.

Share:

administrator

Leave a Reply

Your email address will not be published. Required fields are marked *