ನವದೆಹಲಿ: RSS ಮುಖ್ಯಸ್ಥ ಮೋಹನ್ ಭಾಗವತ್ ಗೆ ಪತ್ರ ಬರೆದಿರುವ ಎಎಪಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಬಿಜೆಪಿ ದಿಲ್ಲಿಯಲ್ಲಿ ಮತದಾರರ ಪಟ್ಟಿಯಿಂದ ಎಎಪಿ ಪರ ಮತದಾರರ ಹೆಸರನ್ನು ಅಳಿಸುತ್ತಿದೆ ಮತ್ತು ಹಣ ಹಂಚುವ ಕಾರ್ಯ ಮಾಡುತ್ತಿದೆ, ಅದಕ್ಕೆ ನಿಮ್ಮ ಸಮ್ಮತಿ ಇದೆಯೆ? ಎಂದು ಕೇಳಿದ್ದಾರೆ. ಅದೇ ಅಲ್ಲದೆ. ಬಿಜೆಪಿ ಮಾಡಿದ ತಪ್ಪುಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಬಲಿಸುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ. 70 ಸದಸ್ಯ ಬಲದ ದೆಹಲಿ ವಿಧಾನ ಸಭೆಗೆ ಫೆಬ್ರವರಿ ತಿಂಗಳಿನಲ್ಲಿ ಚುನಾವಣೆ ನಡೆಯಬೇಕಿದೆ. ಆ ಹಿನ್ನಲೆಯಲ್ಲಿ ಅಲ್ಲಿ ಬಿಜೆಪಿ, ಎಎಪಿ, ಕಾಂಗ್ರೆಸ್ ಪಕ್ಷಗಳ ರಾಜಕೀಯ ಚಟುವಟಿಗಳು ಚುರುಕು ಪಡೆದುಕೊಂಡಿವೆ.
Contact Information
Jattipalya, Chennenahalli, Magadi Road,
Bengaluru
- 10 January, 2025