Contact Information

Jattipalya, Chennenahalli, Magadi Road,
Bengaluru

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025 -26 ನೇ ಸಾಲಿನ ಬಜೆಟ್ ಮಂಡನೆ ಮಾಡಲು ನಡೆಸುತ್ತಿರುವ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಲ್ಪಸಂಖ್ಯಾತರ ಮುಖಂಡರನ್ನು ಹೊರಗಿಟ್ಟು ಸಭೆ ನಡೆಸುವುದು ಅತ್ಯಂತ ಕೀಳು ಮಟ್ಟದ ರಾಜಕಾರಣ ವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಅಲ್ಪಸಂಖ್ಯಾತರ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಮತ ಬೆಂಬಲ ನೀಡಿತ್ತು ರಾಜ್ಯದಲ್ಲಿ ಆಡಳಿತ ಹಾಗೂ ಕೇಂದ್ರಕ್ಕೆ ಒಂಬತ್ತು ಲೋಕಸಭಾ ಸದಸ್ಯರನ್ನು ಆರಿಸುವ ಮೂಲಕ ಈ ರಾಜ್ಯದ ಅಲ್ಪಸಂಖ್ಯಾತರ ಪಾತ್ರ ಮಹತ್ವದಾಗಿತ್ತು ಆದರು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ನಾಯಕರನ್ನು ಕಡೆಗಣಿಸಿರುವುದು ವಿಷಾದಕಾರ ಸಂಗತಿಯಾಗಿದೆ.

ಇದು ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಹಾಗೂ ಸಮುದಾಯಕ್ಕೆ ಮಾಡಿರವು ಅಪಮಾನ ವಾಗಿದೆ.ಸಮುದಾಯ ವನ್ನು ಹೊರಗಿಟ್ಟು ಮಾಡುವ ಈ ಸಭೆ ಕೇವಲ ಕಾಟಾಚಾರದ ಸಭೆ ಆಗಲಿದೆ ಎಂದು ಅವರು ಹೇಳಿದ್ದಾರೆ.

ಮುಸ್ಲಿಂ ಸಮುದಾಯವನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸುವ ಕಾಂಗ್ರೆಸ್ ಚಾಳಿ ಇದರಿಂದ ಬಹಿರಂಗ ಗೊಂಡಿದೆ.ಸಮುದಾಯದ ಮುಖಂಡರು ಈಗಲಾದರೂ ಎಚ್ಚತುಕೊಳ್ಳ ಬೇಕು ಮತ್ತು ಸಿದ್ದರಾಮಯ್ಯನವರ ಈ ನಡೆಯನ್ನು ಪ್ರಶ್ನಿಸಬೇಕೆಂದು ಅವರು ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.

Share:

administrator

Leave a Reply

Your email address will not be published. Required fields are marked *